Thursday, February 24, 2011



ಪ್ರಕೃತಿ ಮಾತೆ

ನಾಗರಿಕ ಆಧುನಿಕತೆಯ ಹುಚ್ಚು ಹೊಳೆ
ಪ್ರಕೃತಿ ಮಾತೆಯ ತೊಳೆಯುತ್ತಿದೆ ಇಂದು..
ಯಂತ್ರಗಳ ದಾಳಿ
ನಾಶ ಮಾಡುತ್ತಿದೆ ನಿರ್ಮಲಗಾಳಿಯನ್ನು..
ನನ್ನನ್ನು ಉಳಿಸಿ ಎನುತಿಹಳು ಪ್ರಕೃತಿ ಮಾತೆ!
ಪ್ರಕೃತಿಯ ಕೂಗು ಕೇಳಿಸದಷ್ಟು
ದೂರವಾಗಿದೆ ಯಾಂತ್ರಿಕತೆ..
ಈ ಪಿಸುಮಾತು ಯಾರಿಗೆ ಗೊತ್ತು..?
ಕೇಳಿಸುವಷ್ಟು ಪುರಸೊತ್ತು ಇಲ್ಲ
ಇಂದು ಜನರಲ್ಲಿ...!
ಯಾಂತ್ರಿಕ ಜೀವನದ ಪ್ರಪಂಚ
ತರಲಿದೆ ಹೊಸ ವಿಸ್ಮಯ ಆದರೆ
ಇದರಿಂದ ಮುಂದೆ ಕಾದಿದೆ ಆಪತ್ತಿನ ಜೀವನ
ಇದನೆಲ್ಲಾ ನೀವೇ ಎದುರಿಸಬೇಕಾದ
ವಿಪತ್ತೆಂದು ದುಃಖಿಸುತ್ತಿರುವಳು
ಪ್ರಕೃತಿ ಮಾತೆ...